ಪ್ರಶಸ್ತಿ ಮತ್ತು ಗೌರವ
ರಾಮಲಿಂಗೇಶ್ವರ ರವರ ಸಾಹಿತ್ಯ, ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಸಾಹಿತ್ಯ ರತ್ನ ಪ್ರಶಸ್ತಿ, ರಾಮನಗರ ರತ್ನ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಬಿಎಂಟಿಸಿ ದತ್ತಿ ಮಯೂರವರ್ಮ ಪ್ರಶಸ್ತಿ, ಕುವೆಂಪು ಆದರ್ಶ ರತ್ನ ಪ್ರಶಸ್ತಿ, ಕದಂಬ ರತ್ನ, ಆದರ್ಶ ರತ್ನ ಪ್ರಶಸ್ತಿ, ಕೃಷ್ಣ ದೇವರಾಯ ಸಾಂಸ್ಕೃತಿಕ ರಾಯಬಾರ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ನೇಗಿಲಯೋಗಿ ಪ್ರಶಸ್ತಿ ಮತ್ತು ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.
ರಾಜ್ಯ ಮಟ್ಟದ ಗುರುತಿನ ಪ್ರಶಸ್ತಿ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ) ನೀಡುವ ಖ್ಯಾತ ವಿಚಾರವಾದಿ, ಚಿಂತಕ ಡಾ. ಹೆಚ್. ನರಸಿಂಹಯ್ಯ ಹೆಸರಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಸಿಸಿರಾ ಅವರು ಭಾಜನರಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳು, ತಾಲ್ಲೂಕು ಆಡಳಿತ ಮತ್ತು ರಾಮನಗರ ಜಿಲ್ಲಾ ಆಡಳಿತಗಳೂ ಇವರ ಸಾಹಿತ್ಯ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಗೌರವಿಸಿವೆ.